Cover Image of Download ಗೋಪಾಲ ದಾಸರ ಕೀರ್ತನೆ ಸಂಗ್ರಹ - gopala dasa keerthane 1.0 APK

0/5 - 1 votes

ID: kannada.keerthane.gopaladasa

Download APK now

The description of ಗೋಪಾಲ ದಾಸರ ಕೀರ್ತನೆ ಸಂಗ್ರಹ - gopala dasa keerthane


ಗೋಪಾಲ (ಭಾಗಣ್ಣ) ದಾಸರ ಕೀರ್ತನೆ ಸಂಗ್ರಹ
ಗೋಪಾಲದಾಸರು - ಕನ್ನಡ ನಾಡಿನ ಹರಿದಾಸರಲ್ಲಿ ಅಗ್ರಗಣ್ಯರು.
ವಿಜಯ ದಾಸರ ಶಿಷ್ಯರು ಮತ್ತು ಭಕ್ತಿಯಲ್ಲಿ ಭಾಗಣ್ಣ ಎಂಬ ಸ್ತುತಿಗೆ ಪಾತ್ರರಾದವರು ಗೋಪಾಲದಾಸರು.
ಶ್ರೀ ರಾಘವೇಂದ್ರಸ್ವಾಮಿಗಳ ಪ್ರೇರಣೆಯಿಂದ ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಜಗನ್ನಾಥದಾಸರು ಮುಂತಾದವರು ದಾಸ ಸಾಹಿತ್ಯದ ಮರುಹುಟ್ಟಿಗೆ ಕಾರಣರಾದರು.
ಪುರಂದರ ದಾಸ, ವಿಜಯದಾಸ, ಗೋಪಾಲದಾಸ ಮತ್ತು ಜಗನ್ನಾಥದಾಸರುಗಳನ್ನು ಒಟ್ಟಿಗೆ ದಾಸ ಚತುಷ್ಟಯರೆಂದು ಕರೆಯುತ್ತಾರೆ.
ಹೀಗೆ ರಾಯರ ಪ್ರಭಾವದಿಂದ ಪ್ರಸಿದ್ಧಿ ಪಡೆದ ವಿಜಯದಾಸರ ಪ್ರಮುಖ ಶಿಷ್ಯರು ಶ್ರೀ ಗೋಪಾಲದಾಸರು.
ಇವರ ತಂದೆ ತಾಯಿ ಇವರಿಗೆ ಇಟ್ಟ ಹೆಸರೆಂದರೆ ಭಾಗಣ್ಣ.
ಭಾಗಣ್ಣ ಗಾಯತ್ರಿ ಮಂತ್ರ ಸಾಧನೆ ಮಾಡಿ ಜನರಿಗೆ ಭವಿಷ್ಯ ಹೇಳಿ ತನ್ನ ಜೀವನ ಸಾಗಿಸುತ್ತಿದ್ದರು .
ಆ ಕಾಲದಲ್ಲಿ ಅವರು ವೆಂಕಟಕೃಷ್ಣ ಎಂಬ ಅಂಕಿತದಿಂದ ಪದಗಳನ್ನು ರಚಿಸಿ ಹಾಡುತ್ತಿದ್ದರು.
ಆಗ ವೆಂಕಟೇಶನ ಭಕ್ತರೂ ಹಾಗೂ ಪುರಂದರದಾಸರ ಶಿಷ್ಯರೂ ಆದ ವಿಜಯದಾಸರು ಭಾಗಣ್ಣನನ್ನು ಭೇಟಿಯಾದರು.
ಅವರಿಂದ ‘ಗೋಪಾಲವಿಠಲ’ ಎಂಬ ಅಂಕಿತವನ್ನು ಪಡೆದು ಭಾಗಣ್ಣ ಅಂದಿನಿಂದ ಗೋಪಾಲದಾಸರೆಂಬ ಹೆಸರಿಗೆ ಪಾತ್ರರಾದರು.
ಪುಷ್ಯ ಬಹುಳ ಅಷ್ಟಮಿ ಉತ್ತನೂರಿನ ಶ್ರೀ ಗೋಪಾಲದಾಸರ ಆರಾಧನ.
(ಕಾಲ ೧೭೨೨ - ೧೭೬೨) ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೊಸರಕಲ್ಲು ಎಂಬ ಗ್ರಾಮದಲ್ಲಿ ಜನಿಸಿದ ಗೋಪಾಲದಾಸರು,
ಇವರು ಉತ್ತನೂರಿನಲ್ಲಿ ಪುಷ್ಯ ಬಹುಳ ಸಪ್ತಮಿಯಂದು ತಮ್ಮ ಕೊನೆಯುಸಿರೆಳೆದರು.
ಉತ್ತನೂರು ಗೋಪಾಲದಾಸರ ಬೃಂದಾವನ ಇರುವ ಸ್ಥಳ.
ತಮ್ಮ ಜೀವನಕ್ಕಾಗಿ ಬಹಳ ಬಡತನದಲ್ಲೇ ಕಾಲ ಕಳೆಯುತ್ತಿದ್ದರು.
ಈತ ಹುಟ್ಟಿದ ಕೆಲವು ವರ್ಷಗಳಲ್ಲಿ ತಂದೆ ಮುರಾರಿರಾಯ ಕಾಲವಾದುದರಿಂದ
ಈತನ ತಾಯಿ ವೆಂಕಮ್ಮ ತನ್ನ ನಾಲ್ವರು ಗಂಡುಮಕ್ಕಳೊಂದಿಗೆ ದಿಕ್ಕಿಲ್ಲದೆ ಸಂಕಾಪುರಕ್ಕೆ ಬಂದು
ಅಲ್ಲಿನ ಊರ ಹೊರಗಿದ್ದ ಮಾರುತಿ ದೇವಾಲಯದಲ್ಲಿ ಆಶ್ರಯ ಪಡೆದಳು.
ಗೋಪಾಲದಾಸರು ಗಾಯತ್ರೀ ಮಂತ್ರ ಧ್ಯಾನದಿಂದ ಅಪೂರ್ವ ಸಿದ್ಧಿಯನ್ನು ಪಡೆದು ಭವಿಷ್ಯ ಹೇಳುವುದರಲ್ಲಿ ನಿಷ್ಣಾತನಾದರು.
ಜ್ಯೋತಿಷ್ಯವನ್ನು ಬಹಳ ಚೆನ್ನಾಗಿ ತಿಳಿದಿದ್ದ ಇವರ ಶಕ್ತಿ ಎಷ್ಟಿತ್ತೆಂದರೆ ಯಾರದೇ ಜ್ಯೋತಿಷ್ಯವನ್ನು ಅವರ ಹಿಂದಿನ ಮೂರು ಜನ್ಮದ ವೃತ್ತಾಂತವನ್ನು ಹೇಳುವಷ್ಟು ಸಾಮರ್ಥ್ಯವಿತ್ತು.
ಮಗನ ಈ ಏಳಿಗೆಯಿಂದ ವೆಂಕಮ್ಮನ ಕಷ್ಟಗಳು ಕ್ರಮಕ್ರಮವಾಗಿ ಕಡಿಮೆಯಾಯಿತಾಗಿ ಆಕೆ ಮಕ್ಕಳೊಂದಿಗೆ ಊರ ಹೊರಗಿನ ಮಾರುತಿ ದೇವಾಲಯದಿಂದ, ಉತ್ತನೂರಿಗೆ ಬಂದು ನೆಲೆಸಿದಳು.
ಅಲ್ಲಿನ ವೆಂಕಟೇಶನ ಗುಡಿಯೆ ಗೋಪಾಲದಾಸರ ಕಾರ್ಯಕ್ಷೇತ್ರವಾಯಿತು.
ಶ್ರೀ ಶ್ರೀನಿವಾಸಾಚಾರ್ಯರಿಗೆ (ಜಗನ್ನಾಥದಾಸರಿಗೆ), ಅವರ ಜೀವಿತದ ೪೦ ವರ್ಷಗಳ ಆಯಸ್ಸನ್ನು ಶ್ರೀ ವಿಜಯರಾಯರ ಅಪ್ಪಣೆಯಂತೆ ದಾನವಾಗಿ ನೀಡಿದ ಮಹಾನುಭಾವರು ಶ್ರೀ ಗೋಪಾಲದಾಸರು.
ಒಮ್ಮೆ ಇವರು ತಮ್ಮ ಶಿಷ್ಯರಿಗೆ ಮಧ್ಯರಾತ್ರಿ ತಮ್ಮ ತಪೋಬಲಪ್ರಭಾವದಿಂದ ಸೂರ್ಯನನ್ನು ದರ್ಶನ ಮಾಡಿಸಿದ್ದರು.
ಗೋಪಾಲದಾಸರು ತನ್ನ ತಮ್ಮಂದಿರೊಂದಿಗೆ ಕೂಡಿ ಆಶುಕವಿತೆಯಲ್ಲಿ ಜಯಪ್ರದನಾಗಿ ಉತ್ತರಾದಿ ಮಠದ ಶ್ರೀಗಳವರಾದ ಸತ್ಯಭೋಧತೀರ್ಥರ ಅನುಗ್ರಹವನ್ನು ಸಂಪಾದಿಸಿದ ಘಟನೆ ಉಲ್ಲೇಖನಾರ್ಹವಾದುದು.
ಐಜಿ ವೆಂಕಟರಾಮಾಚಾರ್ಯ ಮತ್ತು ಹೆಳವನಕಟ್ಟೆ ಗಿರಿಯಮ್ಮ ಮೊದಲಾದವರು ಗೋಪಾಲದಾಸರ ಶಿಷ್ಯವರ್ಗಕ್ಕೆ ಸೇರಿದವರಲ್ಲಿ ಪ್ರಮುಖರು.
ಗೋಪಾಲದಾಸರು ಕೀರ್ತನಕಾರನಾಗಿದ್ದದ್ದಂತೆಯೇ ಕುಶಲಿಯಾದ ಚಿತ್ರಕಾರರು ಆಗಿದ್ದರು.
ಗೋಪಾಲದಾಸರ ಲಭ್ಯ ಸಾಹಿತ್ಯ : ೯೬ ಕೀರ್ತನೆಗಳು,೨೧ ಉಗಾಭೋಗಗಳು,೭೦ ಸುಳಾದಿಗಳು.
Show more

ಗೋಪಾಲ ದಾಸರ ಕೀರ್ತನೆ ಸಂಗ್ರಹ - gopala dasa keerthane 1.0 APK for Android 5.0+

Version 1.0 for Android 5.0+
Update on 2021-10-10
Installs 0++
File size 3.487.984 bytes
Permissions view permissions
What's new ಗೋಪಾಲ ದಾಸರ ಅಥವಾ ಭಾಗಣ್ಣ ದಾಸರ ಕೀರ್ತನೆ , ಸುಳಾದಿ ಹಾಗು ಉಗಾಭೋಗ ಗಳ ಸಂಪೂರ್ಣ ಸಂಗ್ರಹ
We use cookies and other technologies on this website to enhance your user experience.
By clicking any link on this page you are allow us to use them.